ಹುಳಿಗಳಲ್ಲಿ ಲಿಂಬೆ ಹುಳ್ಳಿ ಶ್ರೇಷ್ಠ: ಡಿ.ಕೆ.ಶಿವಕುಮಾರ್
Jul 15 2025, 01:00 AM ISTವಿಜಯಪುರ: ಎಲ್ಲ ಹುಳಿಗಳಲ್ಲೇ ಶ್ರೇಷ್ಠವಾದದ್ದು ಲಿಂಬೆ ಹುಳಿ. ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರೆಯಿಲ್ಲ, ಶಂಬುಗಿಂತ ದೊಡ್ಡ ದೇವರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಾಣ್ಣುಡಿ ಹೇಳಿದರು. ಇಂಡಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾವ ಕ್ಷೇತ್ರಕ್ಕೂ ಇಷ್ಟು ಹಣ ಕೊಟ್ಟಿಲ್ಲ, ಇಂಡಿಗೆ ಮಾತ್ರ ₹ ೪ ಸಾವಿರ ಕೋಟಿ ಕೊಟ್ಟಿದ್ದೇನೆ. ಅದರಿಂದ ೯೩ ಸಾವಿರ ಎಕರೆ ಜಮೀನು ನೀರಾವರಿಯಾಗಲು ಅನುಕೂಲ ಕಲ್ಪಿಸಲಾಗಿದೆ.