ಮಾಲೇಕಲ್ಲು ತಿರುಪತಿ ರಥೋತ್ಸವಕ್ಕೆ ಸಿದ್ಧತೆ
Jun 25 2025, 01:18 AM ISTರಾಜ್ಯದ ಬಹುಭಾಗಗಳ ಭಕ್ತರನ್ನು ಈ ಪುಣ್ಯಕ್ಷೇತ್ರ ನಗರದಿಂದ ಈಶಾನ್ಯ ಭಾಗದ ನಿಸರ್ಗ ವೈಭವಗಳೊಂದಿಗೆ ತಿರುಪತಿ ಗ್ರಾಮದಲ್ಲಿ ಗೋವಿಂದರಾಜಸ್ವಾಮಿ ಮಹಾಲಕ್ಷ್ಮೀ ನೆಲೆಸಿದ್ದಾರೆ. ಪ್ರತಿವರ್ಷದಂತೆ ಆಷಾಢ ದ್ವಾದಶಿ ದಿನದಂದು ಜು.7ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗ ಭಾಗಳಿಂದ ೧ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಲಿದ್ದು, ಅದರಲ್ಲೂ ನವ ವಧು-ವರರು ವಿಶೇಷವಾಗಿ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ತಪ್ಪದೇ ಪಡೆದು ಕಡಿದಾದ ೧೨೦೦ ಮೆಟ್ಟಿಲುಗಳನ್ನು ಹೊಂದಿರುವ ಮಾಲೇಕಲ್ ತಿರುಪತಿ ಬೆಟ್ಟವನ್ನು ಹತ್ತಿ ಬೆಟ್ಟದ ಮೇಲಿರುವ ಶ್ರೀನಿವಾಸ-ಮಹಾಲಕ್ಷ್ಮೀ ದೇವರ ದರ್ಶನ ಪಡೆದರೆ ಅವರ ಜೀವನ ಸುಖಕರವಾಗುವುದೆಂಬ ಪ್ರತೀತಿ ಇದೆ.