ಕೆಚ್ಚಲು ಕೊಯ್ದ ಪ್ರಕರಣ: ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Jan 16 2025, 12:49 AM ISTಭಾರತೀಯ ಸಂಸ್ಕೃತಿಯಲ್ಲಿ ಗೋವು ಆಧಾರಿತ ಕೃಷಿ ಬಹುಮುಖ್ಯವಾದ ವಿಚಾರ. ಗೋವು, ಮನುಷ್ಯ ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧ ಇದ್ದು ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ತನದೇ ಆದ ವಿಶಿಷ್ಟ ಸ್ಥಾನವಿದೆ. ದೇಶದಲ್ಲಿ ಕೃಷಿ ಉಳಿದಿದ್ದರೆ ಅದು ಗೋ ಮಾತೆಯ ಕಾಣಿಕೆಯಾಗಿದೆ. ಆದರೆ, ರಾಜ್ಯದ ಕೋಟ್ಯಂತರ ಜನರ ಭಾವನೆಗಳೊಂದಿಗೆ ಬೆರೆತಿರುವ ಗೋ ಮಾತೆಯನ್ನು ಸಂರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರ್ಪಡಿಸುತ್ತಿದೆ.