ನೀರಿನ ವಿಚಾರದಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ರಾಜಕೀಯ: ಕಾಂಗ್ರೆಸ್ ಮುಖಂಡರ ಆಕ್ರೋಶ
May 06 2024, 12:31 AM ISTಕುಡಿಯುವ ನೀರಿಗೆ ಬರ ಇರುವಾಗ ಬೆಳೆ ರಕ್ಷಣೆಗೆ ನೀರು ಬಿಡಲು ಸಾಧ್ಯವಿಲ್ಲ. ಹೇಮೆ ನೀರು ಬಿಡಲು ಶಾಸಕರು ಸರ್ಕಾರಕ್ಕೆ ಕೇವಲ ಪತ್ರ ಬರೆದರೆ ಸಾಲದು. ವಾಸ್ತವತೆ ನೆಲೆಗಟ್ಟಿನಲ್ಲಿ ಒತ್ತಡ ಹಾಕಬೇಕು. ನೀರಿನ ಸಮಸ್ಯೆಯಿಂದ ಕೆ.ಆರ್.ಪೇಟೆ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಚುನಾವಣೆಗೂ, ಬರ ನಿರ್ವಹಣಾ ಸಮಿತಿ ಸಭೆ ಕರೆದು ಪರಿಶೀಲನೆ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ.