ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ
May 31 2025, 01:23 AM ISTನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವವಾದುದು. ನಿಮ್ಮೆಲ್ಲರ ಸೇವೆಯನ್ನು ನಮ್ಮ ಸರ್ಕಾರ ಯಾವಾಗಲೂ ಗೌರವಿಸುತ್ತದೆ. ಹಾಗೆಯೇ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದರು. ನಾನೂ ಕೂಡ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ, ನಿಮ್ಮ ಬೇಡಿಕೆಗಳ ಪೈಕಿ ಯಾವನ್ನು ಅತಿ ಶೀಘ್ರವಾಗಿ ಈಡೇರಿಸಬಹುದೋ ಅವುಗಳನ್ನು ಮೊದಲು ಬಗೆಹರಿಸಿ, ನಂತರ ಹಂತ ಹಂತವಾಗಿ ಎಲ್ಲ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡುವುದಾಗಿ ಸಂಸದ ಶ್ರೇಯಸ್ ಭರವಸೆ ನೀಡಿದರು.