ಅಂಗವಿಕಲ ಯುವತಿಗೆ ಸಿಗದ ಸರ್ಕಾರಿ ಸೌಲಭ್ಯ
Dec 02 2024, 01:18 AM ISTಅಶಕ್ತ, ದೀನ, ದುರ್ಬಲ, ಶೋಷಿತ ಮಹಿಳಾ ಸಮುದಾಯಕ್ಕೆ ಸವಲತ್ತುಗಳನ್ನು ತಲುಪಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಮೊದಲ ಆದ್ಯತೆಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಹಾಸಿಗೆ ಹಿಡಿದಿರುವ ತಾಲೂಕಿನ ಕಣಕಟ್ಟೆ ಹೋಬಳಿ ಕಿತ್ತನಕೆರೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಂಗವಿಕಲ ಪದವೀಧರ ಯುವತಿ ಶ್ರುತಿ ಇಂತಹ ಎಲ್ಲ ಬಗೆಯ ಸೌಕರ್ಯಗಳಿಂದ ವಂಚಿತಳಾಗಿದ್ದಾಳೆ. ವಾಸ್ತವ ಮನಗಂಡು ತಕ್ಷಣವೇ ಯುವತಿ ನೆರವಿಗೆ ಧಾವಿಸಬೇಕು ಎನ್ನುವ ಒತ್ತಾಯ ಸಾಮಾಜಿಕ ಕಾರ್ಯಕರ್ತ ವೀರಭದ್ರಪ್ಪ ಅವರಿಂದ ಕೇಳಿಬಂದಿದೆ.