ಬಾಳ್ಳುಪೇಟೆ ಗ್ರಾಮ ಪಂಚಾಯತ್ನಲ್ಲಿ ಹಣ ದುರುಪಯೋಗ ಆರೋಪ
Jan 04 2025, 12:30 AM ISTಪ್ರತಿ ತಿಂಗಳು ಗ್ರಾ.ಪಂಗೆ ಸುಮಾರು ೨ ಲಕ್ಷದಷ್ಟು ಕರದ ಮೂಲಕ ಆದಾಯ ಸಂಗ್ರಹವಾಗುತ್ತದೆ. ಆದರೆ, ಕರವಸೂಲಿಗ, ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಕರವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿದ್ದಾರೆ. ಕರವಸೂಲಿ ಬಗ್ಗೆ ನಿಗಾ ವಹಿಸಬೇಕಿದ್ದ ಗ್ರಾ.ಪಂ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದೆ ಇದಕ್ಕೆಲ್ಲ ಕಾರಣ. ಸದ್ಯ ಅಧ್ಯಕ್ಷರು ಕರವಸೂಲಿಗಾರನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಇವರ ಆಡಳಿತದ ಅವಧಿಯಲ್ಲೆ ಭಾರಿ ಅಕ್ರಮ ನಡೆದಿದ್ದು ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.