ಸ್ವಯಂಘೋಷಿತ ಇಂಟಲಿಜೆನ್ಸ್ ಬ್ಯುರೋ ಅಧಿಕಾರಿ ವಶಕ್ಕೆ
May 25 2024, 12:53 AM ISTರಬಕವಿ-ಬನಹಟ್ಟಿ: ತನಗೆಲ್ಲರೂ ಮರ್ಯಾದೆ ಕೊಡಬೇಕು ಎಂಬ ಹುಂಬತನದಿಂದ ಇಂಟಲಿಜೆನ್ಸಿ ಬ್ಯುರೋ ಅಧಿಕಾರಿ ಎಂದು ಸುಳ್ಳು ಹೇಳಿ, ನಕಲಿ ಐಡಿ ಕಾರ್ಡ್, ನಕಲಿ ರಿವಾಲ್ವಾರ್ ಮತ್ತು ಕೆಟ್ಟುಹೋದ ವಾಕಿಟಾಕಿ ಇಟ್ಟುಕೊಂಡು ತಿರುಗಾಡುತ್ತಿದ್ದ ಯುವಕನನ್ನು ರಬಕವಿ-ಬನಹಟ್ಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.