ಆರೋಗ್ಯ ಜಾಗೃತಿಗಾಗಿ ಘಾಟಿಕ್ಷೇತ್ರಕ್ಕೆ ಪಾದಯಾತ್ರೆ
Dec 23 2024, 01:04 AM ISTದೊಡ್ಡಬಳ್ಳಾಪುರ: ನಿಯಮಿತ ನಡಿಗೆಯ ಅಭ್ಯಾಸದಿಂದ ಎಲ್ಲ ಅಂಗಾಂಗಗಳಿಗೂ ಶುದ್ಧರಕ್ತ ಸಂಚಾರವಾಗಿ ಒಟ್ಟಾರೆ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಆದರೆ ಇಂದಿನ ಪೀಳಿಗೆ ಸಹಜ ನಡಿಗೆ ಮರೆತು ಅತಿಯಾಗಿ ವಾಹನಗಳನ್ನು ಅವಲಂಬಿಸಿರುವುದರ ಜೊತೆಗೆ, ಜಂಕ್ ಫುಡ್ಸ್ ಹಾಗೂ ದುಶ್ಚಟಗಳಿಗೆ ದಾಸರಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ದುರಂತ ಎಂದು ನಾಗದಳ ಸಂಚಾಲಕ ಸಿ.ನಟರಾಜ ಹೇಳಿದರು.