ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ವೃದ್ಧಿಗಾಗಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ
Mar 21 2024, 01:02 AM ISTಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಗ್ಯವಾಗಿರಲು, ಅವರ ಸೇವೆ ಹಲವು ವರ್ಷಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ಸದ್ಬಳಕೆಯಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಅಧಿಕಾರದ ಅವಧಿಯಲ್ಲಿ 90 ಸಾವಿರ ಹೆಕ್ಟೆರ್ ನೀರಾವರಿ ಪ್ರದೇಶವನ್ನು 4 ಲಕ್ಷ ಹೆಕ್ಟೆರ್ ನೀರಾವರಿ ಪ್ರದೇಶವನ್ನಾಗಿ ಪರಿವರ್ತನೆ ಮಾಡಿದರು. ಇವರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ ಬಡವರು, ರೈತರ ಬಗ್ಗೆ ಕಾಳಜಿ ಹೊಂದಿ ರಾಜ್ಯದ ರೈತರ ಸಾಲಮನ್ನಾ ಮಾಡಿ ಸಾಧನೆ ಮಾಡಿದ್ದಾರೆ.