ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ: ಎಚ್.ಡಿ.ತಮ್ಮಯ್ಯ
Nov 25 2024, 01:01 AM ISTಚಿಕ್ಕಮಗಳೂರು, ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದ್ದಾರೆ.ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತ ಅತಿ ಹೆಚ್ಚು ಸಂಸ್ಕೃತಿ, ಸಂಸ್ಕಾರ ಅನುಸರಿಸುವ ದೇಶ. ನಮ್ಮ ಬದುಕಿನ ಜಂಜಾಟದ ನಡುವೆ ಅರ್ಧ ಗಂಟೆಗಳ ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.