ದೇವಾಲಯದ ಉಪಯೋಗಕ್ಕಿರುವ ಗ್ರಾಮಠಾಣಾದಲ್ಲಿ ಇತರೆ ಕಟ್ಟಡ ನಿರ್ಮಾಣ ಬೇಡ
Apr 03 2025, 12:36 AM ISTಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಈಶ್ವರ ದೇವಾಲಯಗಳ ಧಾರ್ಮಿಕ ಆಚರಣೆಗೆ ಬಳಕೆಯಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಇತರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ತಿಳಿಸಿದರು. ಈ ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಲು ಮುಂದಾಗಿರುವ ವಿಚಾರ ತಿಳಿದುಬಂದಿದ್ದು, ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಿದರೆ ಅನ್ಯ ಚಟುವಟಿಕೆಗಳು ದೇವಾಸ್ಥಾನದ ಸರಹದ್ದಿನಲ್ಲಿ ನಡೆಯುವ ಸಂಭವವಿದೆ. ಇದರಿಂದ ದೇವಸ್ಥಾನದ ದೇವರ ಕಾರ್ಯಗಳಿಗೆ ಹಾಗೂ ಸಾರ್ವಜನಿಕ ಕಾರ್ಯಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.