ರಸ್ತೆ ಅಗಲೀಕರಣ ನಿಮಿತ್ತ ಕಟ್ಟಡ ತೆರವು ಕಾರ್ಯ ಚುರುಕು
Oct 16 2024, 12:30 AM ISTನಗರದ ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿ ನಿಮಿತ್ತ ಕಟ್ಟಡ ತೆರವು ಕಾರ್ಯ ಮಂಗಳವಾರವೂ ಭರದಿಂದ ಸಾಗಿತು. ನಗರದ ಮುಖ್ಯ ರಸ್ತೆಯ ರಾಮಮಂದಿರ, ಮಸೀದಿ, ಕ್ರಿಶ್ಚಿಯನ್ ರುದ್ರಭೂಮಿ ತಡೆಗೋಡೆ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲೂ ಜೆಸಿಬಿ ಯಂತ್ರ ಅಬ್ಬರಿಸಿದೆ. ತಾಲೂಕು ಕಚೇರಿ ಕಾಂಪೌಂಡ್ , ಅನಿಲ್ ಲಾಡ್ಜ್ ಮುಂಭಾಗದ ಕಟ್ಟೆ, ತಾಲೂಕು ಕಚೇರಿ, ಮಾರುತಿ ಡಾಬಾ ಪಕ್ಕ ಮಂಗಳವಾರ ರಸ್ತೆ ವಿಸ್ತರಣೆ ಕಾರ್ಯಕ್ಕೆ ತೆರವು ಕಾರ್ಯ ನಡೆಯಿತು.