ವರ್ಷಗಳೇ ಕಳೆದರೂ ಪೂರ್ಣಗೊಳ್ಳದ ನೆಮ್ಮಾರು ಗ್ರಾಮಪಂಚಾಯಿತಿ ಕಟ್ಟಡ
Dec 14 2024, 12:48 AM ISTಶೃಂಗೇರಿ, ಕಟ್ಟಡ ಕಾಮಗಾರಿ ಆರಂಭಗೊಂಡು ಅನೇಕ ವರ್ಷಗಳು ಕಳೆಯುತ್ತಾ ಬಂದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಗಾಳಿ ಮಳೆಗೆ ಗೋಡೆಗಳು ಶಿಥಿಲಗೊಂಡು, ಬಿರುಕುಬಿಟ್ಟು ಕುಸಿಯುವ ಹಂತದಲ್ಲಿದೆ. ಗಿಡಗಂಟಿಗಳು ಬೆಳೆದು ಕಟ್ಟಡವೇ ಪೊದೆಗಳಿಂದ ಮುಚ್ಚಿಹೋಗುತ್ತಿವೆ. ಇದು ನೆಮ್ಮಾರು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿ ಕಥೆ ವ್ಯಥೆ.