ಗಾಲ್ಫ್ ಕ್ಲಬ್‌ನಿಂದ ರೇಸ್ ಕ್ಲಬ್ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ಆರೋಪ
Mar 06 2025, 12:32 AM ISTಮೈಸೂರು ರೇಸ್ ಕ್ಲಬ್ ಗೆ ಸೇರಿದ 139.39 ಎಕರೆ ಪ್ರದೇಶದಲ್ಲಿ ಕೆಲವೊಂದಷ್ಟು ಜಾಗವನ್ನು ಗಾಲ್ಫ್ ಕ್ಲಬ್ ನಿರ್ವಹಿಸಲು 1985 ರಲ್ಲಿ ನೀಡಲಾಗಿತ್ತು. ಆದರೆ ಇಡೀ ಜಾಗವು ಈಗಲೂ ರೇಸ್ ಕ್ಲಬ್ ಅಡಿಯಲ್ಲಿಯೇ ಇದೆ. ಕಳೆದ ವರ್ಷ ಕ್ರಾಸ್ ಕಂಟ್ರಿ ಗಾಲ್ಫ್ ಚಾಂಪಿಯನ್‌ಶಿಪ್ ನಡೆಸುವ ವೇಳೆ ಮಹಿಳೆಯರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ರೇಸ್ ಕ್ಲಬ್ ಮೌಖಿಕ ಒಪ್ಪಿಗೆ ನೀಡಿತ್ತು.