ಕರ್ನಾಟಕ ರತ್ನ ದೇಜಗೌ ಪ್ರತಿಷ್ಠಾನ ಅಸ್ತಿತ್ವಕ್ಕೆ: ನೂತನ ಕಾರ್ಯಕಾರಿ ಸಮಿತಿ ಆಯ್ಕೆ
Apr 08 2025, 12:30 AM ISTಪ್ರತಿಷ್ಠಾನದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ತಾಲೂಕಿನ ಕದರಮಂಗಲ ಮರಿಮಲ್ಲಯ್ಯ, ಉಪಾಧ್ಯಕ್ಷರಾಗಿ ಡಾ.ಚಕ್ಕೆರೆ ಶಿವಶಂಕರ್ ಹಾಗೂ ಡಾ.ಕೂಡ್ಲೂರು ವೆಂಕಟಪ್ಪ, ಸಂಸ್ಥಾಪಕ ಕಾರ್ಯದರ್ಶಿಯಾಗಿ ಪತ್ರ ಸಂಸ್ಕ್ರತಿ ರಾಯಭಾರಿ ಹೊಸಹಳ್ಳಿ ದಾಳೇಗೌಡ, ಸಹ ಕಾರ್ಯದರ್ಶಿಯಾಗಿ ಚಕ್ಕೆರೆಯ ಎಲ್.ಜಗದೀಶ್, ಖಜಾಂಚಿಯಾಗಿ ಚನ್ನವೀರೇಗೌಡ, ಮಹಿಳಾ ಕಾರ್ಯದರ್ಶಿಯಾಗಿ ಶಾರದಾ ನಾಗೇಶ್, ಪತ್ರಿಕಾ ಕಾರ್ಯದರ್ಶಿಯಾಗಿ ಹೇಮಂತ್ ಗೌಡ ಹಾಗೂ ಟ್ರಸ್ಟಿಯಾಗಿ ಉಮಾ ದಾಳೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.