ಕರ್ನಾಟಕ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘದ ಪದಾಧಿಕಾರಿಗಳ ಆಯ್ಕೆ
Mar 24 2025, 12:33 AM ISTಹೊಳೆನರಸೀಪುರ ತಾಲೂಕಿನ ಶಿಕ್ಷಕಿಯರು ಸೇರಿದ ಸಭೆಯಲ್ಲಿ ಜಿಲ್ಲೆಯ ಸಾವಿತ್ರಿಬಾಯಿ ಫುಲೆ ಸಂಘದ ಗೌರವಾಧ್ಯಕ್ಷೆ ಕುಸುಮ ಅವರ ಮಾರ್ಗದರ್ಶನದಲ್ಲಿ ತಾಲೂಕು ಘಟಕವನ್ನು ರಚಿಸಲಾಯಿತು. ತಾಲೂಕು ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆಯಾಗಿ ಕೆ.ಎಂ.ಮಮತ, ಪ್ರಧಾನ ಕಾರ್ಯದರ್ಶಿಯಾಗಿ ಭ್ರಮರಾಂಭ ಹಾಗೂ ಖಜಾಂಚಿಯಾಗಿ ಮಧುಮತಿ, ೧೦ ಜನ ಉಪಾಧ್ಯಕ್ಷರು,೧೦ ಜನ ಸಂಘಟನಾ ಕಾರ್ಯದರ್ಶಿಗಳು ಹಾಗೂ ೧೦ ಜನ ಸಹ ಕಾರ್ಯದರ್ಶಿಗಳ ಆಯ್ಕೆ ಮಾಡಲಾಯಿತು.