ಕೃಷ್ಣ ಕಾನೂನು ಕಾಲೇಜಿಗೆ ನ್ಯಾಕ್ನಿಂದ ಮಾನ್ಯತೆ
Dec 15 2024, 02:03 AM ISTಎಂ. ಕೃಷ್ಣ ಕಾನೂನು ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನ ನ್ಯಾಕ್ ಪರಿಶೀಲನೆ ನಂತರ ಬಿ ಗ್ರೇಡ್ ಮಾನ್ಯತೆ ನೀಡಿದೆ ಎಂದು ಪ್ರಾಂಶುಪಾಲ ಡಾ. ಶ್ರೀನಿವಾಸ್ ತಿಳಿಸಿದರು. ಈ ಗ್ರೇಡ್ ಮುಂದಿನ 5ವರ್ಷಗಳ ಕಾಲ ಮುಂದುವರಿಯಲಿದ್ದು, ಕಾಲೇಜಿನ ವಾತಾವರಣ, ವಿದ್ಯಾರ್ಥಿಗಳಿಗೆ ಕಾಲೇಜಿನ ಸೌಕರ್ಯಗಳು, ಬೋಧನ ಕೌಶಲ್ಯ, ವಿದ್ಯಾರ್ಥಿಗಳ ಚಟುವಟಿಕೆ, ಗ್ರಂಥಾಲಯ ವ್ಯವಸ್ಥೆ, ಶಿಸ್ತು, ಹಲವಾರು ವಿಚಾರಗಳನ್ನ ಪರಿಶೀಲಿಸಿದ ತಂಡವು ಮೆಚ್ಚುಗೆ ವ್ಯಕ್ತಪಡಿಸಿದೆ.