ನಕಲಿ ಆಧಾರ್ ಕಾರ್ಡ್ ನೀಡಿಕೆ ದೂರು
Oct 21 2024, 12:50 AM ISTನಕಲಿ ಆಧಾರ್ ಕಾರ್ಡ್ ತಯಾರಿಸಿ ಕೊಡುತ್ತಿದ್ದಾರೆಂಬ ದೂರಿನ ಮೇಲೆ ತಾಲೂಕಿನ ಬಿಕ್ಕೋಡು ಸೈಬರ್ ಕೇಂದ್ರ ಹಾಗೂ ಗ್ರಾಮ ಒನ್ ಸೆಂಟರ್ ಮೇಲೆ ತಹಸೀಲ್ದಾರ್ ದಾಳಿ ನಡೆಸಿ ಪರಿಶೀಲಿಸಿದರು. ಹಾಸನ ಜಿಲ್ಲೆಯಲ್ಲಿ ನಖಲಿ ಆಧಾರ್ ಕಾರ್ಡುಗಳ ಹಾವಳಿ ಹೆಚ್ಚಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ತಹಸೀಲ್ದಾರ್ ಅವರಿಗೆ ಪರಿಶೀಲನೆಗೆ ಸ್ಪಷ್ಟ ಸೂಚನೆ ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಮತಾ ಅವರು, ಬಿಕ್ಕೋಡು ಉಪ ತಹಸೀಲ್ದಾರ್ ಪ್ರದೀಪ್, ಅರೇಹಳ್ಳಿ ಪಿಎಸ್‌ಐ ಶೋಭ ಅವರೊಂದಿಗೆ ದಾಳಿ ನಡೆಸಿ ಪರಿಶೀಲಿಸಿದರು.