ಶ್ರೀರಾಮ ದೇಗುಲ ಮಾದರಿಯನ್ನೇ ಬಾಗಿಲಿಗೆ ಕೆತ್ತಿಸಿ ಪೂಜಿಸುವ ಕುಟುಂಬ!
Jan 21 2024, 01:31 AM IST ದೇಶಾದ್ಯಂತ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಸಡಗರ ಸಂಭ್ರಮ. ಇತ್ತ ತಾಲೂಕಿನ ಈಸೂರಿನಲ್ಲಿ 20 ವರ್ಷಗಳ ಹಿಂದೆಯೇ ಶ್ರೀರಾಮ ಮಂದಿರವನ್ನು ಮನೆಯ ಬಾಗಿಲಿನಲ್ಲಿ ಅಂದವಾಗಿ ಕೆತ್ತಿಸಿ, ಭಕ್ತಿಯಿಂದ ನಿತ್ಯ ಪೂಜಿಸಿ ಸಂಭ್ರಮಿಸುತ್ತಿರುವ ಸಂಗತಿ. ಗ್ರಾಮಸ್ಥ ಮಹಾದೇವಪ್ಪ, ಸಾವಿತ್ರಮ್ಮ ಈ ವಿಷಯದ ಕೇಂದ್ರಬಿಂದು. ಮಹಾದೇವಪ್ಪ ಅವರ ರಾಮಭಕ್ತಿಯಿಂದಾಗಿ ಮನೆ ಬಾಗಿಲಲ್ಲಿ ಕೆತ್ತನೆ ಅಯೋಧ್ಯೆ ಶ್ರೀರಾಮ ಮಂದಿರ ಕೆತ್ತನೆ ಮಾಡಲಾಗಿದ್ದು, ಪ್ರಸ್ತುತ ಮಹಾದೇವಪ್ಪ ಅವರು ಇಲ್ಲ ಎಂಬುದೇ ಕುಟುಂಬಕ್ಕೆ ಬೇಸರದ ಸಂತಿಯಾಗಿದೆ.