ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿಗೆ ಉತ್ತಮ ಕೊಡುಗೆ ನೀಡಿದೆ. 2014 ರಲ್ಲಿ ದೇಶದ ಕೃಷಿ ಬಜೆಟ್ 22 ಸಾವಿರ ಕೋಟಿ ಇತ್ತು. ಈ ಬಾರಿ ಅದು 1.30 ಲಕ್ಷ ಕೋಟಿ ಆಗಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಜನ ಸಾಮಾನ್ಯರಿಗೆ ಅಗತ್ಯ ಗುಣಮಟ್ಟದ ಔಷಧಗಳನ್ನು ಅಗ್ಗದ ದರದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಒದಗಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾನುವಾರುಗಳಿಗೆ ಅಗತ್ಯವಾದ ಔಷಧಗಳನ್ನು ಜನೆರಿಕ್ ಮಾದರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಬ್ಯಾಂಕ್ ಅಥವಾ ಸಹಕಾರಿ ಸಂಸ್ಥೆಗಳು ನಷ್ಟಕ್ಕೊಳಗಾದ ವೇಳೆ ಠೇವಣಿ ಇಟ್ಟ ಗ್ರಾಹಕರಿಗೆ ನೆರವಾಗಲು ಇರುವ ಠೇವಣಿ ವಿಮೆ ಮೊತ್ತವನ್ನು ಹಾಲಿ ಇರುವ 5 ಲಕ್ಷ ರು.ಗಿಂತ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರ ಮುಂದಿದೆ ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಪದೇ ಪದೇ ಗಲಭೆಗಳು ನಡೆಯುತ್ತಿವೆ.