ಕೇಂದ್ರ ಸರ್ಕಾರದಿಂದ ಜನಸಾಮಾನ್ಯರ ಬದುಕು ದುರ್ಬಲ
Apr 27 2025, 01:49 AM ISTಕನ್ನಡಪ್ರಭ ವಾರ್ತೆ ವಿಜಯಪುರ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದೆ, ಬೆಲೆ ಏರಿಕೆಯ ಪ್ರಹಾರ ಮಾಡಿ ಜನಸಾಮಾನ್ಯನ ಜೇಬಿಗೆ ಹೊರೆ ಹಾಕಿದ್ದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಸಂವಿಧಾನ ಬಚಾವೋ - ಮೆಹಂಗಾಯಿ ಹಠಾವೋ (ಸಂವಿಧಾನ ರಕ್ಷಿಸಿ - ಬೆಲೆ ಏರಿಕೆ ಕಡಿತಗೊಳಿಸಿ) ಎಂಬ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮನವಿ ಮಾಡಿದರು.