ಜೆಡಿಎಸ್ ಪಕ್ಷದೊಳಗಿನ ವಿರೋಧಿಗಳ ಬಗ್ಗೆ ಸೂರಜ್ ಅಸಮಾಧಾನ
Jan 13 2025, 12:45 AM ISTಹೊಳೆನರಸೀಪುರ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಜೆಡಿಎಸ್ ಪಕ್ಷದೊಳಗೇ ಇದ್ದುಕೊಂಡು ಮೋಸ ಮಾಡಿದವರ ವಿರುದ್ಧ ಆಕ್ರೋಶ ಅಸಮಾಧಾನ ಹೊರಹಾಕಿದರು. ನಾನು ನಿನ್ನೆ, ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ. ಯಾವುದೇ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ನನ್ನ ಗಮನಕ್ಕೆ ತನ್ನಿ. ನಿಮ್ಮ ನೆರವಿಗೆ ಯಾರು ಬರ್ತಾರೋ, ಬಿಡ್ತಾರೋ ಈ ಸೂರಜ್ ರೇವಣ್ಣ ಬರ್ತಾನೆ ಎಂದರು.