ಶಾಸಕ ರವಿಗಣಿಗ ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರು. ಆಹ್ವಾನ ನೀಡಿರುವ ಸಾಕ್ಷ್ಯಇರುವುದಾದರೆ ದಾಖಲೆಗಳನ್ನು ಜನರ ಮುಂದೆ ಇಡಲಿ ಎಂದು ಚನ್ನಪಟ್ಟಣ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶಾಸಕ ಗಣಿಗ ಅವರಿಗೆ ಸವಾಲು ಹಾಕಿದರು.
ನಗರ ವ್ಯಾಪ್ತಿಯ ಚಿಕ್ಕಮಳೂರು ಮಂಗಳವಾರಪೇಟೆ, ಮರಳುಹೊಲ, 8ನೇ ಕ್ರಾಸ್ ಸರ್ಕಲ್, ಭೈರವ ಅಂಗಡಿ, ತಮಿಳು ಕಾಲೋನಿ, ಕೆಂಪೇಗೌಡ ಸರ್ಕಲ್, ಕೋಟೆ ಸರ್ಕಲ್, ವರದರಾಜಸ್ವಾಮಿ ದೇವಸ್ಥಾನ, ಸ್ವಿಪರ್ಸ್ ಕಾಲೋನಿ, ಹನುಮಂತ ನಗರ ಸೇರಿದಂತೆ ಇನ್ನಿತರೆ ವಾರ್ಡ್ ಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.
ಜನರ ಆಶೀರ್ವಾದದಿಂದ ನಿಖಿಲ್ ಕುಮಾರಸ್ವಾಮಿ ಅವರು ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ವಿಧಾನ ಕಲಾಪದಲ್ಲಿ ರೂಲ್ 69 ಅಡಿಯಲ್ಲಿ ಚರ್ಚೆ ಮಾಡುತ್ತಾರೆ.