ಅನಾದಿಕಾಲದಿಂದಲೂ ಭಾರತ ವೈಜ್ಞಾನಿಕ ಚಿಂತನೆ ಹೊಂದಿದೆ: ಡಾ.ಎಸ್. ಸೋಮನಾಥ
Jan 04 2025, 12:32 AM ISTಗಣಿತಶಾಸ್ತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಭಾರತೀಯ ಸಂಖ್ಯಾ ಪದ್ಧತಿ ಮತ್ತು ಶೂನ್ಯ ಕೊಡುಗೆ ಪರಿಣಾಮ, ಗಣಿತ ಶಾಸ್ತ್ರ ಇಷ್ಟೆಲ್ಲಾ ಬೆಳವಣಿಗೆ ಹೊಂದಿದೆ. ರೋಮನ್ ಸಂಖ್ಯಾ ಪದ್ಧತಿ ಅನೇಕ ನೂನ್ಯತೆಯಿಂದ ಕೂಡಿದೆ. ಆದರೆ ಭಾರತೀಯ ಗಣಿತಶಾಸ್ತ್ರ ಅನಂತದವರೆಗೆ (ಇನ್ಫಿನಿಟಿ) ಎಣಿಕೆ ಹೊಂದಿದೆ. ಭಾರತದ ಆರ್ಯುವೇದ, ಯೋಗ, ವಾಸ್ತುಶಿಲ್ಪದ ಜ್ಞಾನ ಪರಂಪರೆಯು ವಿಶ್ವದ ಪ್ರಗತಿಯಲ್ಲಿ ಅನನ್ಯ ಕೊಡುಗೆ ನೀಡಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ ಹೇಳಿದರು.