ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿರುದ್ಧದ ಪ್ರಯಾಣಿಕರ ಅಸಮಾಧಾನ ಹೆಚ್ಚಿದ್ದು, ಮೆಟ್ರೋದಲ್ಲಿ ಸುರಕ್ಷತೆ, ಕೊನೆಯ ಮೈಲಿ ಸಂಪರ್ಕ ಅವ್ಯವಸ್ಥೆ ಸೇರಿ ಇನ್ನಿತರ ಸಮಸ್ಯೆಗಳನ್ನು ಮೊದಲು ಪರಿಹರಿಸಿ ಎಂದು ಒತ್ತಾಯಿಸುತ್ತಿದ್ದಾರೆ.
ನಮ್ಮ ಮೆಟ್ರೋ ಟಿಕೆಟ್ ದರ ಶೇ.50ರಷ್ಟು ಏರಿಕೆಗೆ ವ್ಯಾಪಕವಾಗಿ ಜನಾಕ್ರೋಶ ವ್ಯಕ್ತವಾಗಿದ್ದು, ಬಿಎಂಟಿಸಿ ಬಸ್ಗಿಂತ ಮೆಟ್ರೋ ದರವೇ ಹೆಚ್ಚಾಗಿದೆ, ದೇಶದಲ್ಲಿ ಇರುವ ಮೆಟ್ರೋ ಪೈಕಿ ಬೆಂಗಳೂರು ಮೆಟ್ರೊ ದರ ಅತಿ ಹೆಚ್ಚಾಗಿದೆ, ದರ ಹೆಚ್ಚಳದಿಂದ ಜನರು ಮತ್ತೆ ಸ್ವಂತ ವಾಹನಗಳತ್ತ ಹೋಗುವುದು ಅನಿವಾರ್ಯವಾಗುತ್ತದೆ
ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ನೊಂದಿಗೆ ಲಿಂಕ್, ಸೈಕಲ್ಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವುದು ಸೇರಿ ಹಲವು ಅಂಶವನ್ನು ಒಳಗೊಂಡ ಹೊಸ ಪಾರ್ಕಿಂಗ್ ನೀತಿ ಅಂತಿಮ
ಕೇಂದ್ರ ರೇಷ್ಮೇ ಮಂಡಳಿ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಡುವಿನ ನಮ್ಮ ಮೆಟ್ರೋ ಮಾರ್ಗಕ್ಕಾಗಿ ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ 65 ಮೀ. ಉದ್ದದ ಸಂಯೋಜಿತ ಗರ್ಡರ್ನ್ನು ಸೋಮವಾರ ಯಶಸ್ವಿಯಾಗಿ ಅಳವಡಿಸಲಾಗಿದೆ.
ಮೆಟ್ರೋ ರೈಲು ಪ್ರಯಾಣ ದರ ಪರಿಷ್ಕರಿಸುವ ಸಂಬಂಧ ಅನುಸರಿಸಿದ ಮಾನದಂಡ, ಅಧ್ಯಯನ ಕುರಿತ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.
ಬೆಂಗಳೂರು ಮೆಟ್ರೋ ಯೋಜಿತ ಕಾಮಗಾರಿಗಳನ್ನು 2029ರ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಹೇಳಿದರು.