ಮೈಸೂರು ದಸರಾ:ಗಮನಸೆಳೆದ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರ
Oct 25 2023, 01:15 AM ISTವಿಶ್ವವಿಖ್ಯಾತ ಮೈಸೂರು ದಸರಾದ ಜಂಬುಸವಾರಿಯಲ್ಲಿ ಗಡಿಜಿಲ್ಲೆ ಚಾಮರಾಜನಗರದಿಂದ ಜಾನಪದ, ಅರಣ್ಯ ಸಂಪತ್ತು, ಧಾರ್ಮಿಕ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಿತು.ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕೈಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಡೆದಿದ್ದು " ''''ಜಾನಪದ ಭಕ್ತಿಯ ಬೀಡು- ಹುಲಿ ಆನೆಗಳ ಸಂತೃಪ್ತಿಯ ಕಾಡು'''' ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧಚಿತ್ರ ರೂಪಿಸಲಾಗಿತ್ತು.