ಮೆಗಾ ಡೇರಿ ಉದ್ಘಾಟನೆಗೆ ಮೋದಿ ಆಹ್ವಾನಿಸುವ ಚಿಂತನೆ
Sep 02 2025, 12:00 AM ISTಹಾಸನ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ಒಟ್ಟು 2392.42 ಕೋಟಿಗಳಷ್ಟು ವಹಿವಾಟು ನಡೆಸಿ, ಕಳೆದ ಸಾಲಿನಿಗಿಂತ ಶೇಕಡಾ 8.58ರಷ್ಟು ಹೆಚ್ಚಳ ಸಾಧಿಸಿದೆ. ತೆರಿಗೆ ಪೂರ್ವ ಲಾಭ ೨೨.೨೯ ಕೋಟಿ ಆಗಿದ್ದು, ಬೈಲಾ ಪ್ರಕಾರ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿದ ನಿವ್ವಳ ಲಾಭ ೫.೦೪ ಕೋಟಿಯನ್ನು ಸದಸ್ಯ ಸಂಘಗಳಿಗೆ ಬೋನಸ್, ಡಿವಿಡೆಂಡ್ ಮತ್ತು ಇತರ ರೂಪದಲ್ಲಿ ಹಂಚಲಾಗಿದೆ. ಈ ಸಾಲಿನಲ್ಲಿ ದಿನಸಿ ಸರಾಸರಿ ೧೪.೧೫ ಲಕ್ಷ ಲೀಟರ್ ಹಾಲು (೧೭೧೭ ಸಂಘಗಳಿಂದ) ಸಂಗ್ರಹಣೆ ನಡೆದಿದ್ದು, ಗರಿಷ್ಠ ೧೫.೧೨ ಲಕ್ಷ ಲೀಟರ್ ಹಾಲು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.