ಪ್ರಧಾನಿ ಮೋದಿ ನಾನು ತುಂಬಾ ಹತ್ತಿರ, ನಿಕಟ ಸಂಬಂಧ : ಡೊನಾಲ್ಡ್ ಟ್ರಂಪ್

| N/A | Published : Sep 19 2025, 01:00 AM IST

ಪ್ರಧಾನಿ ಮೋದಿ ನಾನು ತುಂಬಾ ಹತ್ತಿರ, ನಿಕಟ ಸಂಬಂಧ : ಡೊನಾಲ್ಡ್ ಟ್ರಂಪ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

ನವದೆಹಲಿ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

‘ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ, ಭಾರತದ ಪ್ರಧಾನಿಗೆ ನಾನು ತುಂಬಾ ಹತ್ತಿರವಾಗಿದ್ದೇನೆ. ನಾನು 2 ದಿನದ ಹಿಂದೆ ಅವರೊಂದಿಗೆ ಮಾತನಾಡಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ನಮ್ಮ ನಡುವೆ ಉತ್ತಮ ಸಂಬಂಧವಿದೆ’ ಎಂದು ತಿಳಿಸಿದ್ದಾರೆ. ಸುಂಕ ವಿವಾದ ಹಾಗೂ ಭಾರತ-ಪಾಕ್‌ ಕದನವಿರಾಮ ಮಧ್ಯಸ್ಥಿಕೆ ವಿವಾದ ನಂತರ ಉಭಯ ನಾಯಕರ ನಡುವೆ ಇತ್ತೀಚೆಗೆ ಸಂಬಂಧ ಹಳಸಿತ್ತು.

ನವೆಂಬರ್‌ ವೇಳೆ ಟ್ರಂಪ್‌ ಶೇ.25 ಸುಂಕ ಇಳಿಸುವ ಸಾಧ್ಯತೆ

ಕೋಲ್ಕತಾ: ರಷ್ಯಾ ತೈಲ ಖರೀದಿಗಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇರಿರುವ ಶೇ.25ರಷ್ಟು ತೆರಿಗೆ ದಂಡವು ನವೆಂಬರ್‌ ವೇಳೆಗೆ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್‌ ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ತೆರಿಗೆ ಕಡಿತದ ಬಗ್ಗೆ ನನ್ನ ಬಳಿ ಯಾವುದೇ ಆಧಾರಗಳೂ ಇಲ್ಲ. ಆದರೆ ನನಗೆ ಹೀಗೆನ್ನಿಸುತ್ತಿದೆ. ಅಮೆರಿಕವು ನವೆಂಬರ್‌ ವೇಳೆಗೆ ಶೇ.25ರಷ್ಟು ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ. ಈಗಾಗಲೇ ಉಭಯ ದೇಶಗಳ ನಡುವೆ ವ್ಯಾಪಾರ ಮಾತುಕತೆಗಳು ನಡೆಯುತ್ತಿದ್ದು, ಇದು ಫಲಪ್ರದವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

Read more Articles on