ಹೊಸ ತಲೆಮಾರಿನ ಬರಹಗಾರರ ಓದಿನಲ್ಲೂ ರಾಜಕೀಯ
Jan 08 2025, 12:16 AM ISTಹೊಸ ತಲೆಮಾರಿನ ಕವಿಗಳು, ಬರಹಗಾರರು ಹಾಗೂ ಕತೆಗಾರರ ಕೃತಿಗಳನ್ನು ಓದುವ ವಿಚಾರದಲ್ಲಿಯೇ ರಾಜಕೀಯ ನಡೆಯುತ್ತಿದೆ ಎಂಬ ಅನುಮಾನ ಇದೆ ಎಂದು ಯುವ ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ ಅಭಿಪ್ರಾಯಪಟ್ಟರು. ಇದಕ್ಕೆ ಯುವ ಬರಹಗಾರ ಸಚಿನ್ ತೀರ್ಥಹಳ್ಳಿ ದನಿಗೂಡಿಸಿ ಬೆಂಬಲಿಸಿದರು. ಹೌದು; ಹೆಚ್ಚು ಪರಿಚಿತರು, ಜನಪ್ರಿಯ ಆದವರ ಸಾಹಿತ್ಯವನ್ನೇ ಓದಬೇಕು ಅನ್ನೋ ಮನಸ್ಥಿತಿ ಇದೆ ಎನಿಸುತ್ತದೆ ಎಂದರು. ಆದರೆ ಅಂಕಣಕಾರ್ತಿ ಕುಸುಮಾ ಆಯರಹಳ್ಳಿ ಅಲ್ಲಗಳೆದರು.