.ಹೊಳೆನರಸೀಪುರ ಪುರಸಭೆ ಅಧ್ಯಕ್ಷ ಶ್ರೀಧರ್ ದಿಢೀರ್ ರಾಜೀನಾಮೆ
Feb 27 2025, 12:31 AM ISTಹೊಳೆನರಸೀಪುರ ಪಟ್ಟಣದ ಪುರಸಭೆಗೆ ಒಟ್ಟು ೩ ಅವಧಿಗೆ ಸದಸ್ಯರಾಗಿದ್ದ ಕೆ.ಶ್ರೀಧರ್, ೨೦೨೪ರ ಆಗಸ್ಟ್ ೧೯ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಅವರು ದಿಢೀರನೇ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಶಾಸಕ ಎಚ್.ಡಿ.ರೇವಣ್ಣ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಸಾಕಷ್ಟು ಸದಸ್ಯರು ಇದ್ದಾರೆ. ಆದರೆ ಶಾಸಕ ಎಚ್.ಡಿ.ರೇವಣ್ಣ ಅವರ ಆಶೀರ್ವಾದ ಪಡೆದ ಸದಸ್ಯ ಅಧ್ಯಕ್ಷ ಗದ್ದುಗೆ ಪಡೆಯುವುದು ಖಚಿತ.