ಪಟ್ಟಣದ ಅವ್ಯವಸ್ಥೆಗಳ ಪರಿಶೀಲಿಸಿದ ರಾಜ್ಯ ಉಪಲೋಕಾಯುಕ್ತ ಬಿ.ವೀರಪ್ಪ
May 19 2025, 12:27 AM ISTಪುರಸಭೆ ಮುಖ್ಯಾಧಿಕಾರಿ ನಟರಾಜ್ ಹಾಗೂ ಹೆಲ್ತ್ ಇನ್ಸ್ ಪೆಕ್ಟರ್ ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದೊಳಗಿನ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶಗೊಂಡ ಉಪ ಲೋಕಾಯುಕ್ತರು, ನೀನು ಡಿಪೋ ಮ್ಯಾನೇಜರ್ ಅಲ್ಲ ಡ್ಯಾಮೇಜರ್. ನಿನ್ನ ಮನೆ ಆವರಣವನ್ನು ಹೀಗೆ ಗಬ್ಬಾಗಿ ಇಟ್ಕೋತೀಯಾ. ನಿನಗೆ ನಾಚಿಕೆ ಆಗ್ಬೇಕು ಎಂದು ಸಾರಿಗೆ ಅಧಿಕಾರಿಯನ್ನು ಛೇಡಿಸಿದರು.