ಧಾರವಾಡಕ್ಕೆ ವಿದೇಶಿ ಮೂಲದವರು ಬಂದಿಲ್ಲ
May 20 2025, 01:18 AM ISTಧಾರವಾಡ ಜನ್ನತ್ ನಗರ ಮತ್ತು ಆರೋಗ್ಯ ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಶಾಸಕರು ಮಾಹಿತಿ ನೀಡಿದ್ದರು. ಅದರಂತೆ ನಮ್ಮ ತಂಡ ಮಸೀದಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ. 15ರಿಂದ 56 ವಯಸ್ಸಿನ 20 ಜನ ಸೂರತ್ನಿಂದ ಮಸೀದಿಯಲ್ಲಿ ತರಬೇತಿ ನೀಡಲು ಬಂದಿದ್ದಾರೆ. ಅವರ ಆಧಾರ್, ಪಾಸ್ಪೋರ್ಟ್ ಸಹ ಪರಿಶೀಲಿಸಿದ್ದೇವೆ.