ವಿದೇಶಿ ಉದ್ಯೋಗ: ಜನಮನ ಸೆಳೆದ ಬೀದಿನಾಟಕ
May 29 2024, 12:58 AM IST "ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. " - ಹೀಗೆ ಬೋರ್ಗರೆದ ದನಿ ಮಂಗಳವಾರ ನಗರದ ರಾಮ್ ಅಂಡ್ ಕೋ ಸರ್ಕಲ್ನಲ್ಲಿ ನೆರೆದಿದ್ದವರ ಮನಮುಟ್ಟಿತು. ನಗರದ ದವನ್ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಹರಳೆಣ್ಣೆ ಕೊಟ್ರ ಬಸಪ್ಪ ಸರ್ಕಲ್ (ರಾಮ್ ಅಂಡ್ ಕೋ ಸರ್ಕಲ್)ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವಪೀಳಿಗೆಯಲ್ಲಿ, ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರನ್ನು ಬೀದಿನಾಟಕ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.