ಇಂದಿನಿಂದ ವಿದ್ಯುತ್ ಭವನ ಎದುರು ಮೆಸ್ಕಾಂ ವಿರುದ್ಧ ಗುತ್ತಿಗೆದಾರರ ಧರಣಿ
Jan 17 2024, 01:45 AM ISTಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಸರ್ಕಾರಿ ಯೋಜನೆಗಳ ಸಣ್ಣ ವಿದ್ಯುತ್ ಕಾಮಗಾರಿಗಳ ಕಾರ್ಯಾದೇಶಗಳನ್ನು ಕ್ರೋಢಿಕರಿಸಿ, ಬೃಹತ್‌ಮಟ್ಟದ ದರ ಒಪ್ಪಂದ ಮತ್ತು ಟೆಂಡರ್ ಕರೆದಿರುವ ಮೆಸ್ಕಾಂ ವಿರುದ್ಧ ಜ.17ರಿಂದ ನಗರದ ಮೆಸ್ಕಾಂ ವಿದ್ಯುತ್ ಭವನ ಎದುರು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸದಸ್ಯ ಮಹಾಲಿಂಗೇಗೌಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.