ಶರಾವತಿ ಕಣಿವೆ ಸಮಸ್ಯೆ ಇಂದಿಗೂ ಮುಗಿದಿಲ್ಲ: ನಾ.ಡಿ. ಬೇಸರ
Dec 26 2023, 01:32 AM ISTಸಾಗರ ತಾಲೂಕಿನ ಜನತೆಯನ್ನು ಇಡೀ ಕರ್ನಾಟಕ ಮರೆಯುವಂತಿಲ್ಲ. ರಾಜ್ಯಕ್ಕೆ ಬೆಳಕು ನೀಡಿ, ಕತ್ತಲೆಯಲ್ಲೇ ಇರುವ ಇಲ್ಲಿಯ ಶರಾವತಿ ಕಣಿವೆಯ ಇಂಚಿಂಚು ಭೂಮಿಯಲ್ಲೂ ಜನರ ನಾಡಿಮಿಡಿತ ಅಡಗಿದೆ. ಇಲ್ಲಿಯ ಸಮಸ್ಯೆಗಳು ಹಲವಾರು ದಶಕಗಳಿಂದ ಬಗೆಹರಿಯದಿರುವ ಬಗ್ಗೆ ನಾಡಿನ ಹಿರಿಯ ಸಾಹಿತಿ ನಾ.ಡಿಸೋಜ ಬೇಸರ ವ್ಯಕ್ತಪಡಿಸಿದ್ದಾರೆ. ಶರಾವತಿ ಕಣಿವೆ ಸಮಸ್ಯೆ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೆಯೇ ಮುಂದುವರಿದಿದೆಯೇ ಹೊರತು, ಮುಗಿದಿಲ್ಲ ಎಂದಿದ್ದಾರೆ.