ಎ, ಬಿ ಖಾತಾ ಅಭಿಯಾನಕ್ಕೆ ಸಚಿವ ತಿಮ್ಮಾಪೂರ ಚಾಲನೆ
Mar 12 2025, 12:50 AM ISTರಾಜ್ಯ ಸರ್ಕಾರದ ಅಧೀಸೂಚನೆಯಂತೆ 2024ರ ಸೆಪ್ಟೆಂಬರ್ 10ಕ್ಕೂ ಮುಂಚೆ ನೋಂದಣಿ ಆದ ಆಸ್ತಿಗಳಿಗೆ ಬಿ ಖಾತಾ ನೀಡುವುದರಿಂದ ರಾಜ್ಯದ ಒಟ್ಟು 32 ಲಕ್ಷ ಆಸ್ತಿಗಳಿಗೆ ಈ ಸೌಲಭ್ಯ ದೊರಕಲಿದೆ, ಬಿ ಖಾತೆ ಪಡೆಯಲು ಮೇ 10ರವರೆಗೆ ಅವಕಾಶವಿದ್ದು, ನಗರದ ಸುಮಾರು 5 ಸಾವಿರ ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ. ಅವರು ತಮ್ಮ ಆಸ್ತಿಗಳಿಗೆ ಅಧಿಕೃತ ಮಾಲೀಕರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದರು.