ಡಯಾನ ಬುಕ್ ಗ್ಯಾಲರಿಗೆ ಮಾಜಿ ಸಿಎಂ ಬಿಎಸ್‌ವೈ ಭೇಟಿ
Aug 03 2025, 01:30 AM ISTರಾಜಕೀಯ ಜಂಜಾಟ ಮರೆತು ಸಾಹಿತ್ಯದ ಕಡೆ ಮುಖ ಮಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಿಲಕ್ ನಗರದಲ್ಲಿರುವ ಡಯಾನ ಬುಕ್ ಗ್ಯಾಲರಿಗೆ ಶನಿವಾರ ಭೇಟಿ ನೀಡಿ, ಬುಕ್ ಗ್ಯಾಲರಿಯ ಎಲ್ಲ ವಿಭಾಗಗಳನ್ನು ಸಂದರ್ಶಿಸಿದರು. ಸಾಹಿತಿಗಳ ಕೃತಿಗಳು, ಪತ್ರಕರ್ತರ ಬರಹಗಳು, ಜನಪದ ಕಲೆ ಸಾಹಿತ್ಯ ಮೊದಲಾದ ಪುಸ್ತಕಗಳ ಬಂಡಾರ ವೀಕ್ಷಣೆ ಮಾಡಿದ ಬಿಎಸ್ ವೈ, ಎಸ್. ಎಲ್. ಭೈರಪ್ಪ ನವರ ಪರ್ವ, ಪತ್ರಕರ್ತ ವಿಶ್ವೇಶ್ವರ ಭಟ್ ರವರ ಸಂಪಾದಕರ ಸದ್ಯ ಶೋಧನೆ ಪುಸ್ತಕಗಳನ್ನು ಖರೀದಿಸಿದರು.