ಪ್ರತ್ಯೇಕವಾಗಲು ಮುಂದಾಗಿದ್ದ ಪತ್ನಿಯ ಕತ್ತು ಕೊಯ್ದು ಕೊಂದ

| Published : Apr 30 2024, 07:06 AM IST

murder
ಪ್ರತ್ಯೇಕವಾಗಲು ಮುಂದಾಗಿದ್ದ ಪತ್ನಿಯ ಕತ್ತು ಕೊಯ್ದು ಕೊಂದ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತೇಕವಾಗುತ್ತಿರುವುದಕ್ಕೆ ಸಿಟ್ಟಾಗಿ ಪತಿಯೇ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು:  ಪ್ರತೇಕವಾಗುತ್ತಿರುವುದಕ್ಕೆ ಸಿಟ್ಟಾಗಿ ಪತಿಯೇ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲಿಯಾಸ್‌ನಗರದ ಶಿಯಾಫತ್‌ ಉನ್ನೀಸಾ (38) ಕೊಲೆಯಾದ ದುರ್ದೈವಿ. ಸೋಮವಾರ ಸಂಜೆ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಆರೋಪಿ ನೂರುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ನೂರುಲ್ಲಾ ಮತ್ತು ಶಿಯಾಫತ್‌ ಉನ್ನೀಸಾ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಜಗಳವಾಗುತ್ತಿತ್ತು. ಹೀಗಾಗಿ ಶಿಯಾಫತ್‌ ಪತಿಯಿಂದ ಪ್ರತ್ಯೇಕವಾಗಲು ನಿರ್ಧರಿಸಿದ್ದರು. ಕೌಟುಂಬಿಕ ಕಲಹದಿಂದ ನೂರುಲ್ಲಾ ಕಳೆದ ಐದು ದಿನಗಳಿಂದ ಮನೆಗೆ ಬಂದಿರಲಿಲ್ಲ. ಸೋಮವಾರ ಸಂಜೆ ಶಿಯಾಫತ್‌ ಉನ್ನೀಸಾ ಮನೆ ಖಾಲಿ ಮಾಡಲು ಮುಂದಾಗಿದ್ದರು.

ಈ ವಿಚಾರ ಗೊತ್ತಾಗಿ ಮನೆ ಬಳಿ ಬಂದ ನೂರುಲ್ಲಾ, ಪತ್ನಿ ಶಿಯಾಫತ್‌ ಜತೆಗೆ ಜಗಳ ತೆಗೆದು ಗಲಾಟೆ ಮಾಡಿದ್ದಾನೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೋಪೋದ್ರಿಕ್ತನಾದ ನೂರುಲ್ಲಾ, ಚಾಕು ತೆಗೆದು ಪತ್ನಿಯ ಕುತ್ತಿಗೆ ಕೊಯ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಯಾಫತ್‌ ಉನ್ನೀಸಾ ತೀವ್ರ ರಕ್ತಸ್ರಾವಾಗಿ ಮೃತಪಟ್ಟಿದ್ದಾರೆ.

ಈ ವಿಚಾರ ತಿಳಿದು ಸ್ಥಳಕ್ಕೆಬಂದ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ನೂರುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.