ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ಶೃಂಗ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬೆಂಗಳೂರಿನ ಮೂಕಾಂಬಿಕ ನಗರದ ಶೃಂಗ ಡಿಪ್ಲೋಮಾ ಇನ್‌ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

 ಮಂಡ್ಯ : ಹುಡುಗರಿಬ್ಬರು ನಿಂದಿಸಿದರೆಂಬ ಕಾರಣಕ್ಕೆ ಭಾರತೀ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಭಾರತೀ ಕಾಲೇಜಿನ ಶೃಂಗ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬೆಂಗಳೂರಿನ ಮೂಕಾಂಬಿಕ ನಗರದ ಶೃಂಗ ನಿವಾಸಿ. ಡಿಪ್ಲೋಮಾ ಇನ್‌ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ರಾಕೇಶ್‌ ಮತ್ತು ರಾಹುಲ್‌ ಈಕೆಯನ್ನು ನಿಂದಿಸಿದರೆಂಬ ಕಾರಣಕ್ಕೆ ಮನನೊಂದ ಶೃಂಗ, ಹಾಸ್ಟೆಲ್‌ಗೆ ಬಂದು ಕೊಠಡಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತ ವಿದ್ಯಾರ್ಥಿನಿಯ ತಾಯಿ ವಿ.ಆಶಾ ಕೆ.ಎಂ.ದೊಡ್‌ಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೀರುವಿನಲ್ಲಿದ್ದ ಚಿನ್ನಾಭರಣ ದೋಚಿದ ಕಳ್ಳರು

ಹಲಗೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಕಿಟಕಿ ಮುರಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಮೀಪದ ಧನಗೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನವಾಜ್ ಷರೀಫ್ ಮತ್ತು ಕುಟುಂಬದ ಸದಸ್ಯರೆಲ್ಲರೂ ಕಾರ್ಯ ನಿಮಿತ್ತ ಮಾ.11ರಂದು ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿ ಮನೆ ಕಿಟಕಿ ಮುರಿದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಬೆಳ್ಳಿ ಪದಾರ್ಥಗಳು ಸೇರಿದಂತೆ ಚಿನ್ನ ಆಭರಣಗಳನ್ನು ಕಳವು ಮಾಡಿದ್ದಾರೆ. ಸುಮಾರು 1.21 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ನವಾಜ್ ಷರೀಫ್ ದೂರು ದಾಖಲಿಸಿದ್ಧಾರೆ.