ಸಾರಾಂಶ
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇವತ್ತು ಗಮನಿಸಬಹುದಾದ 6 ಸಿನಿಮಾಗಳು
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇವತ್ತು ಗಮನಿಸಬಹುದಾದ 6 ಸಿನಿಮಾಗಳು
1. ಬಿಲೈನ್
ಸುಪ್ರಿಯೋ ದತ್ತ ನಿರ್ದೇಶನದ ಬೆಂಗಾಲಿ ಸಿನಿಮಾ. ನಿವೃತ್ತ ವ್ಯಕ್ತಿಯೊಬ್ಬನ ಏಕಾಂತ ಹಾಗೂ ಇದಕ್ಕೆ ಕಿಟಕಿಯಾಗುವ ಒಂದು ಫೋನ್‌ಕಾಲ್ ಸುತ್ತ ಈ ಕಥನವಿದೆ. ಅವಧಿ : 88 ನಿಮಿಷ. 2. ವಾಟರ್ ಲಿಲ್ಲೀಸ್ ಸೌತ್ ಕೊರಿಯನ್ ಸಿನಿಮಾ. ಚಾನೋ ಲೀ ನಿರ್ದೇಶನವಿದೆ. ಸಿನಿಮಾ ನಟಿಯಾಗುವ ಕನಸು ಹೊತ್ತ ಸ್ಕೂಲ್ ಡ್ರಾಪ್‌ಔಟ್ ಹುಡುಗಿಯೊಬ್ಬಳ ಕನಸು ಹಾಗೂ ಬದುಕಿನ ಮುಖಾಮುಖಿಯನ್ನಿಲ್ಲಿ ಕಾಣಬಹುದು. ಅವಧಿ: 119 ನಿಮಿಷ.
3. ವೇವ್ಸ್
ಇದು ಫ್ರಾನ್ಸ್ ದಂಗೆಯ ಕಾಲಘಟ್ಟದ ಚಿತ್ರ. ದಂಗೆಯ ಸೂಚನೆ ಬಗ್ಗೆ ಚಿಂತಿತನಾಗುವ ರೇಡಿಯೋ ಕೇಂದ್ರದ ಕೆಲಸಗಾರ ತಾಮಸ್ ತನ್ನ ಕುಟುಂಬ ಹಾಗೂ ಸಾಮಾಜಿಕತೆಯ ನಡುವೆ ತೊಳಲಾಡುವ ಕಥೆ. ಅವಧಿ: 131 ನಿಮಿಷ 4. ದ ಸೆಕೆಂಡ್ ಆ್ಯಕ್ಟ್ ಫ್ರೆಂಚ್ ಕಾಮಿಡಿ ಚಲನಚಿತ್ರ. ಕ್ವೆಂಟಿನ್ ಡ್ಯುಪಿಯಕ್ಸ್ ನಿರ್ದೇಶನವಿದೆ. ಹುಡುಗಿಯೊಬ್ಬಳು ಪ್ರೀತಿಸುತ್ತಿರುವ ಹುಡುಗನನ್ನು ಕುಟುಂಬದವರಿಗೆ ಪರಿಚಯಿಸುವಾಗಿನ ಸನ್ನಿವೇಶವನ್ನು ವಿನೋದವಾಗಿ ಕಟ್ಟಿಕೊಟ್ಟಿದ್ದಾರೆ. ಅವಧಿ: 80 ನಿಮಿಷ
5. ದ ಗರ್ಲ್ ವಿತ್ ದ ನೀಡಲ್
ಮೊದಲ ಮಹಾಯುದ್ಧದ ನಂತರದ ಬಡತನ, ವಂಚನೆಗಳನ್ನು ತೀವ್ರವಾಗಿ ದಾಟಿಸುತ್ತದೆ. ಕಾರೋಲೈನ್ ಎಂಬ ಬಡ ಯುವತಿ ಅರಿವಿಲ್ಲದೇ ಭೂಗತ ಜಗತ್ತಿನ ಕಂಬಂಧ ಬಾಹುಗಳಲ್ಲಿ ಸಿಲುಕುವ ಕಥೆ. ಅವಧಿ: 115 ನಿಮಿಷ
6. ಗ್ರ್ಯಾಂಡ್ ಟೂರ್
ಬರ್ಮಾದ ರಂಗೂನ್‌ನಲ್ಲಿ 1918ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮದುವೆಯಿಂದ ಓಡಿಹೋಗುವ ಬ್ರಿಟಿಷ್ ಅಧಿಕಾರಿ ಮತ್ತು ಆತನ ಬೆನ್ನಟ್ಟಿ ಬರುವ ವಧುವಿನ ಚಿತ್ರಣ ಸಿನಿಮಾದಲ್ಲಿದೆ. ಪೋರ್ಚುಗಲ್ ಭಾಷೆಯಲ್ಲಿದೆ. ಅವಧಿ: 129 ನಿಮಿಷ