ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್‌ ಸಿನಿಮಾ ನಿರ್ಮಾಣ ಸಂಸ್ಥೆ ಇದೀಗ 50 ವರ್ಷ ಪೂರೈಸಿದೆ.

 ಸಿನಿವಾರ್ತೆ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೈನ್ಸ್‌ ಸಿನಿಮಾ ನಿರ್ಮಾಣ ಸಂಸ್ಥೆ ಇದೀಗ 50 ವರ್ಷ ಪೂರೈಸಿದೆ.

ಈ ಸಂತಸ ಹಂಚಿಕೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವಜ್ರೇಶ್ವರಿ ಕಂಬೈನ್ಸ್‌ನ ಸಾಧನೆ ಬಿಂಬಿಸುವ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಪಾರ್ವತಮ್ಮ ಅವರ ವೀಡಿಯೋವಿದ್ದು ಅವರು, ‘ವಜ್ರೇಶ್ವರಿ ಕಂಬೈನ್ಸ್‌ ಆರಂಭಿಸಿದಾಗ ಪುನೀತ್‌ 25 ದಿವಸದ ಮಗು. ಅವನ ಹತ್ರ ಸ್ವಿಚ್‌ ಆನ್‌ ಮಾಡಿಸಿದ್ದೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ‘ನಮ್ಮ ಅಮ್ಮ ಹಾಗೂ ಅಪ್ಪಾಜಿ ಸಿನಿಮಾ ನಿರ್ಮಾಣದ ಜೊತೆಗೆ ಚಂದನವನದ ಪರಂಪರೆಯನ್ನೂ ಎತ್ತಿ ಹಿಡಿದರು. ವಜ್ರೇಶ್ವರಿ ಕಂಬೈನ್ಸ್‌ನಿಂದ ಹೊರಬಂದ 86ಕ್ಕೂ ಅಧಿಕ ಚಿತ್ರಗಳಲ್ಲಿ 75 ಚಿತ್ರಗಳು ಸಕ್ಸಸ್‌ ಆಗಿವೆ. ಆನಂದ ಆಗಿ ಬಂದ ಶಿವಣ್ಣ, ಚಿರಂಜೀವಿ ಸುಧಾಕರ ಆಗಿ ಬಂದ ರಾಘಣ್ಣ, ಅಪ್ಪು ಆಗಿ ಬಂದ ನನ್ನ ಅಪ್ಪು.. ಇವರೆಲ್ಲರ ಸಿನಿಮಾಗಳು ಇತಿಹಾಸ ನಿರ್ಮಿಸಿದವು. ಹೆಸರುಗಳು ಅಚ್ಚಳಿಯದೇ ಉಳಿದವು. ‘ಸಿದ್ಧಾರ್ಥ’ದಿಂದ ವಿನಯ್‌, ‘ಎಕ್ಕ’ ಮೂಲಕ ಯುವ ಸಿನಿಮಾರಂಗಕ್ಕೆ ಬಂದಿದ್ದಾರೆ. ವಜ್ರೇಶ್ವರಿ ನಮ್ಮ ಸಂಸ್ಥೆ ಮಾತ್ರ ಅಲ್ಲ, ಎಲ್ಲಾ ಅಭಿಮಾನಿಗಳು, ನಟರು, ತಂತ್ರಜ್ಞರು ಕಟ್ಟಿರುವ ಕನಸಿನ ಅರಮನೆ’ ಎಂದಿದ್ದಾರೆ.