ಪುನೀತ್‌ ರಾಜ್‌ಕುಮಾರ್ 50ನೇ ವರ್ಷದ ಜನ್ಮದಿನಕ್ಕೆ ಅಪ್ಪು ಸಿನಿಮಾ ಮರುಬಿಡುಗಡೆ ಆಗಿದೆ.

ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇವರು ನಟಿಸಿರುವ ‘ಅಪ್ಪು’ ಸಿನಿಮಾ ಇಂದು (ಮಾ.14) ಮರು ಬಿಡುಗಡೆ ಆಗುತ್ತಿದೆ. ಮೊದಲ ದಿನದ ಹಲವು ಶೋಗಳು ಹೌಸ್‌ಫುಲ್‌ ಆಗಿವೆ.

ಈ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ 2002ರಲ್ಲಿ ನಡೆದ ‘ಅಪ್ಪು’ ಸಿನಿಮಾ ಶತದಿನೋತ್ಸವ ಸಮಾರಂಭದ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಡಾ. ರಾಜ್‌ ಜೊತೆಗೆ ಭಾಗವಹಿಸಿದ್ದ ರಜನಿಕಾಂತ್‌, ಪುನೀತ್‌ ಅವರನ್ನು ‘ಸಿಂಹದ ಮರಿ’ ಎಂದಿರುವುದು ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.

ಸುಮಾರು 200 ದಿನಗಳ ಪ್ರದರ್ಶನ ಕಂಡಿದ್ದ ‘ಅಪ್ಪು’ ಸಿನಿಮಾ ತೆಲುಗು, ತಮಿಳು, ಬಂಗಾಲಿ ಭಾಷೆಗೆ ರಿಮೇಕ್‌ ಆಗಿತ್ತು. ಬಾಂಗ್ಲಾ ಭಾಷೆಗೆ ರಿಮೇಕ್‌ ಆಗಿ ಭರ್ಜರಿ ಗಳಿಕೆ ಕಂಡಿತ್ತು.