ಸಾರಾಂಶ
ಸಿನಿವಾರ್ತೆ
ಹೊಸಬರ ‘ಬ್ರಹ್ಮರಾಕ್ಷಸ’ ಚಿತ್ರದ ಐಟಂ ಸಾಂಗ್ ಅನ್ನು ನಿರ್ಮಾಪಕರ ಸಂಘದ ಆಧ್ಯಕ್ಷ ಉಮೇಶ್ ಬಣಕಾರ್, ನಾಗೇಂದ್ರ ಅರಸ್ ಬಿಡುಗಡೆ ಮಾಡಿದ್ದಾರೆ. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಬಂದ ಶಂಕರ್ ವಿ ನಿರ್ದೇಶನದ, ಕೆಎಂಪಿ ಶ್ರೀನಿವಾಸ್ ನಿರ್ಮಾಣದ ಚಿತ್ರವಿದು.
1980ರ ಕಾಲದಲ್ಲಿ ನಡೆಯುವ ಕತೆ ಹೊಂದಿರುವ ಸಿನಿಮಾದಲ್ಲಿ ಅಂಕುಶ್ ಏಕಲವ್ಯ ಹಾಗೂ ಪಲ್ಲವಿ ಗೌಡ ಜೋಡಿಯಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಶಂಕರ್ ವಿ, ‘ಈಗಾಗಲೇ ನಮ್ಮ ಚಿತ್ರದ ಟೀಸರ್ ಮೆಚ್ಚುಗೆ ಬಂದಿದೆ. ಈಗ ಕನ್ನಡದಲ್ಲಿ ಮಾತ್ರ ಐಟಂ ಸಾಂಗ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಮಹತ್ವದ ಘಟ್ಟದಲ್ಲಿ ಬರುವ ಹಾಡು ಇದು. ಲಾಕ್‌ಡೌನ್ ಸಂದರ್ಭದಲ್ಲಿ ಈ ಚಿತ್ರದ ಕತೆ ಹೊಳೆಯಿತು. ತಪ್ಪು ಮಾಡದೆ ಇಬ್ಬರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ. ಅದೇ ಸೇಡಿನಿಂದ ಹೇಗೆ ದ್ವೇಷ ತೀರಿಸಿಕೊಳ್ಳಲು ಹೊರಡುತ್ತಾರೆ ಎನ್ನುವುದು ಚಿತ್ರದ ಕತೆ’ ಎಂದರು. ಬಿರಾದಾರ್, ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ರಥಾವರ ದೇವು, ಭುವನ್ ಗೌಡ ಚಿತ್ರದ ಮುಖ್ಯ ಪಾತ್ರಧಾರಿಗಳು.