ಚಿತ್ರರಂಗಕ್ಕೆ ಬಂದು 15 ವರ್ಷ ಆಯಿತು: ವಿಕ್ಕಿ ವರುಣ್‌

| Published : Aug 28 2024, 12:49 AM IST

ಚಿತ್ರರಂಗಕ್ಕೆ ಬಂದು 15 ವರ್ಷ ಆಯಿತು: ವಿಕ್ಕಿ ವರುಣ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಕ್ಕಿ ವರುಣ್‌ ಹಾಗೂ ಧನ್ಯಾ ರಾಮ್‌ಕುಮಾರ್‌ ಅಭಿನಯದ ‘ಕಾಲಾಪತ್ಥರ್‌’ ಚಿತ್ರ ಸೆ.13ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ಕನ್ನಡಪ್ರಭ ಸಿನಿವಾರ್ತೆ

ವಿಕ್ಕಿ ವರುಣ್‌ ಹಾಗೂ ಧನ್ಯಾ ರಾಮ್‌ಕುಮಾರ್‌ ಅಭಿನಯದ ‘ಕಾಲಾಪತ್ಥರ್‌’ ಚಿತ್ರ ಸೆ.13ಕ್ಕೆ ತೆರೆಗೆ ಬರುತ್ತಿದೆ. ಭುವನ್‌ ಸುರೇಶ್‌, ನಾಗರಾಜ್‌ ಬಿಲ್ಲಿನಕೋಟೆ ನಿರ್ಮಾಣದ ಈ ಚಿತ್ರವನ್ನು ವಿಕ್ಕಿ ವರುಣ್‌ ಅವರೇ ನಿರ್ದೇಶಿಸಿದ್ದಾರೆ. ಹಿರಿಯ ಪತ್ರಕರ್ತ ಕೆ ಎಸ್‌ ವಾಸು ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

ವಿಕ್ಕಿ ವರುಣ್‌, ‘ನಾನು ಕನ್ನಡ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ನನ್ನ ನಟನೆಯ ‘ಕೆಂಡಸಂಪಿಗೆ’ ಕೂಡ ಸೆಪ್ಟೆಂಬರ್‌ನಲ್ಲೇ ಬಂದಿತ್ತು. ಈಗ ನನ್ನ ನಿರ್ದೇಶನ ಮತ್ತು ಅಭಿನಯದ ‘ಕಾಲಾಪತ್ಥರ್‌’ ಅದೇ ತಿಂಗಳಲ್ಲಿ ಬರುತ್ತಿದೆ. ಇದು ಕಪ್ಪುಕಲ್ಲಿಗೆ ಸಂಬಂಧಿಸಿದ ಕತೆ. ಸತ್ಯಪ್ರಕಾಶ್‌ ಕತೆ ಬರೆದಿದ್ದಾರೆ’ ಎಂದರು.

ಧನ್ಯ ರಾಮ್‌ಕುಮಾರ್‌, ‘ನಾನು ಶಿಕ್ಷಕಿ ಪಾತ್ರ ಮಾಡಿದ್ದೇನೆ. ಕತೆ ಮತ್ತು ನನ್ನ ಪಾತ್ರ ತುಂಬಾ ಚೆನ್ನಾಗಿದೆ’ ಎಂದರು. ನಿರ್ಮಾಪಕ ಉದಯ್‌ ಕೆ. ಮೆಹ್ತಾ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಛಾಯಾಗ್ರಾಹಕ ಸಂದೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು.