ಸಿ ಚಿತ್ರದ ಟ್ರೇಲರ್‌ ಬಿಡುಗಡೆ

| Published : Aug 21 2024, 12:32 AM IST

ಸಾರಾಂಶ

ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿ ಚಿತ್ರ ಟ್ರೇಲರ್‌ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ಆಗಸ್ಟ್‌ 23ಕ್ಕೆ ತೆರೆಗೆ ಬರಲು ಸಜ್ಜಾಗಿರುವ ‘ಸಿ’ ಚಿತ್ರದ ಟ್ರೇಲರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ನಟ ರಾಜವರ್ಧನ್‌ ಬಿಡುಗಡೆ ಮಾಡಿದ್ದಾರೆ. ಇದು ಅಪ್ಪ, ಮಗಳ ಸುತ್ತ ಇರುವ ಕ್ರೈಮ್‌ ಥ್ರಿಲ್ಲರ್‌ ಕತೆಯಾಗಿದ್ದು, ಈಗಾಗಲೇ ಟೀಸರ್‌ ಹಾಗೂ ಒಂದು ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರದ ನಿರ್ದೇಶಕ ಕಿರಣ್‌, ‘ಚಿತ್ರದ ಶೀರ್ಷಿಕೆಯಾಗಿರುವ ‘ಸಿ’ ಅಕ್ಷರದಲ್ಲಿ ಮೂರು ಅರ್ಥಗಳಿವೆ. ಆದರೆ, ಟ್ರೇಲರ್‌ನಲ್ಲಿ ಒಂದು ಸಿ ಮಾತ್ರ ತೋರಿಸಿದ್ದು, ಉಳಿದ ಎರಡು ಅರ್ಥದ ‘ಸಿ’ಯನ್ನು ಚಿತ್ರದಲ್ಲೇ ನೋಡಬೇಕು. ಸಸ್ಪೆನ್ಸ್‌, ಎಮೋಷನ್‌ ತಳಹದಿಯಲ್ಲಿ ಚಿತ್ರದ ಕತೆ ಸಾಗುತ್ತದೆ. ತಂದೆ ಮತ್ತು ಮಗಳ ಪಾತ್ರಗಳು ಚಿತ್ರದ ಮುಖ್ಯ ಕೇಂದ್ರಬಿಂದುಗಳು. ನಿರ್ದೇಶನದ ಜತೆಗೆ ನಾನೇ ನಾಯಕನಾಗಿಯೂ ನಟಿಸಿದ್ದೇನೆ’ ಎಂದರು.

ನಿರ್ಮಾಪಕ ಸುಬ್ರಮಣಿ, ಪ್ರಶಾಂತ್ ನಟನಾ, ಸಾನ್ವಿಕಾ, ಶ್ರೀಧರ ರಾಮ್, ಮಧುಮಿತ ಇದ್ದರು.