ಸಾರಾಂಶ
ರಕ್ಷಿತ್ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಗಣೇಶ ಹಬ್ಬಕ್ಕೆ ರಿಲೀಸ್
ಸಿನಿವಾರ್ತೆ
ರಕ್ಷಿತ್ ಶೆಟ್ಟಿ ನಿರ್ಮಾಣದ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸೆ.5ಕ್ಕೆ ರಿಲೀಸ್ ಆಗಲಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧಾರ ಮಾಡಿದೆ.
ಕಾವ್ಯಾತ್ಮಕ ಅಂಶಗಳಿಂದ ಗಮನ ಸೆಳೆಯುತ್ತಿರುವ ಈ ತ್ರಿಕೋನ ಲವ್‌ಸ್ಟೋರಿಯಲ್ಲಿ ವಿಹಾನ್, ಅಂಕಿತಾ ಅಮರ್ ನಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಎಲ್ಲಾ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಹಾಡುಗಳೂ ವಿಭಿನ್ನ ಶೈಲಿಯಲ್ಲಿರುವುದು ವಿಶೇಷ. ಒಂದು ಸುಂದರ ಪ್ಯಾಕೇಜ್ ಆಗಿ ಸಿನಿಮಾ ಮೂಡಿ ಬರಬೇಕು ಎಂದು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಆಸ್ಥೆ ವಹಿಸಿದ್ದಾರೆ.
ಸಿನಿಮಾ ಕುರಿತು ರಕ್ಷಿತ್ ಶೆಟ್ಟಿ, ‘ಪ್ರೀತಿಯ ತಂಗಾಳಿ ಸೆಪ್ಟೆಂಬರ್ 5ರಂದು ಬೀಸಲಿದೆ, ಈ ಸುಂದರ ಪ್ರೇಮ ದೃಶ್ಯ ಕಾವ್ಯವನ್ನು ಚಿತ್ರಮಂದಿರದಲ್ಲಿಯೇ ನೋಡಿ ಸಂಭ್ರಮಿಸೋಣ’ ಎಂದು ಹೇಳಿದ್ದಾರೆ.