ಸಾರಾಂಶ
ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೋ ರೈಲು ಸೇವೆ ಕಂಡ ದೆಹಲಿಯಲ್ಲಿ ಇನ್ನು ಸರಕು ಸಾಗಣೆಗೂ ಮೆಟ್ರೋ ರೈಲು ಬಳಕೆಯಾಗಲಿದೆ. ಈ ಕುರಿತಂತೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ)ವು ಸರಕು ಸೇವೆ ನೀಡುವ ಬ್ಲ್ಯೂ ಡಾರ್ಟ್ ಜೊತೆ ಒಪ್ಪಂದವೊಂದಕ್ಕೆ ಸಹಿಹಾಕಿದೆ.
ನವದೆಹಲಿ: ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೋ ರೈಲು ಸೇವೆ ಕಂಡ ದೆಹಲಿಯಲ್ಲಿ ಇನ್ನು ಸರಕು ಸಾಗಣೆಗೂ ಮೆಟ್ರೋ ರೈಲು ಬಳಕೆಯಾಗಲಿದೆ. ಈ ಕುರಿತಂತೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ)ವು ಸರಕು ಸೇವೆ ನೀಡುವ ಬ್ಲ್ಯೂ ಡಾರ್ಟ್ ಜೊತೆ ಒಪ್ಪಂದವೊಂದಕ್ಕೆ ಸಹಿಹಾಕಿದೆ.
ಈ ಒಪ್ಪಂದದ ಅನ್ವಯ ಜನಸಂಚಾರ ಕಡಿಮೆ ಇರುವ ಅವಧಿಯಲ್ಲಿ ಮೆಟ್ರೋ ರೈಲುಗಳನ್ನು ಸರಕು ಸಾಗಣೆಗಾಗಿ ಬಳಸಿಕೊಳ್ಳಲಾಗುವುದು. ಇಂಥ ಪ್ರಯೋಗ ದಕ್ಷಿಣ ಏಷ್ಯಾ ಫೆಸಿಫಿಕ್ ವಲಯದಲ್ಲೇ ಮೊದಲು ಎನ್ನಲಾಗಿದೆ.
ನೀಲಿ ಮಾರ್ಗದಲ್ಲಿ ಈಗಾಗಲೇ ಪ್ರಯೋಗ ನಡೆಸಲಾಗಿದ್ದು, ಕ್ರಮೇಣ ವಿವಿಧ ಮಾರ್ಗಗಳಿಗೆ ವಿಸ್ತರಿಸಲಾಗುವುದು. ಪೂರ್ಣ ಪ್ರಮಾಣದ ಸಂಚಾರವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ, ವಾಹನಗಳ ದಟ್ಟಣೆಯನ್ನು ತಗ್ಗಿಸುವ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮೆಟ್ರೋ ನಿಗಮ ಹೇಳಿದೆ.