ನನ್ನ ಮದುವೆ ಸೀರೆ ಎರಡೂವರೆ ಲಕ್ಷದ್ದಲ್ಲ, 2.7 ಸಾವಿರದ್ದು: ಅನುಶ್ರೀ

| N/A | Published : Sep 05 2025, 12:45 PM IST

anchor anushree

ಸಾರಾಂಶ

ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನುಶ್ರೀ ಅವರ ಮದುವೆ ಸೀರೆಯ ರೇಟೆಷ್ಟು ಎಂಬ ಚರ್ಚೆ ಗರಿಗೆದರಿದೆ.

ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನುಶ್ರೀ ಅವರ ಮದುವೆ ಸೀರೆಯ ರೇಟೆಷ್ಟು ಎಂಬ ಚರ್ಚೆ ಗರಿಗೆದರಿದೆ.

ಹಲವು ಮಂದಿ ಧಾರೆಗೂ ಮುನ್ನ ಅನುಶ್ರೀ ಉಟ್ಟಿದ್ದ ಹಾಲು ಬಿಳುಪಿನ ಸೀರೆಯ ಬೆಲೆ ಎರಡೂವರೆಯಿಂದ ಮೂರು ಲಕ್ಷ ರು ಎಂದು ಹೇಳುತ್ತಿದ್ದಾರೆ. ಸಾಮಾನ್ಯ ಸಮಾರಂಭಕ್ಕೇ ಲಕ್ಷಗಟ್ಟಲೆ ಬೆಲೆಯ ಉಡುಗೆ ಧರಿಸುವ ಸೆಲೆಬ್ರಿಟಿಗಳು ಮದುವೆಯ ವೇಳೆ ಅತಿ ದುಬಾರಿ ಸೀರೆ ಉಡುವುದು ಸರ್ವೇ ಸಾಮಾನ್ಯ. ಸೋಷಲ್‌ ಮೀಡಿಯಾದಲ್ಲೂ ಈ ಮನಸ್ಥಿತಿಯಲ್ಲೇ ಜನ ಸೀರೆಯ ರೇಟು ಊಹಿಸಿದ್ದರು.

ಇದಕ್ಕೀಗ ಅನುಶ್ರೀ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನ್ನ ಈ ಸೀರೆಯ ಬೆಲೆ 2.5 ಲಕ್ಷ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದರ ಬೆಲೆ 2.5 ಲಕ್ಷ ರು. ಅಲ್ಲ, 2700 ರು.ಗಳಷ್ಟೇ. ಮೈಸೂರಿಂದ ಖರೀದಿಸಿದ ಸೀರೆ ಇದು’ಎಂದು ಹೇಳಿದ್ದಾರೆ.

ಅನುಶ್ರೀ ಅವರ ಸಿಂಪಲ್‌ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Read more Articles on