ಕಾಶ್ಮೀರ ಹಿಂಸಾಚಾರಕ್ಕೆ ಕಂಬನಿ ಮಿಡಿದ ತಾರೆಯರು

| N/A | Published : Apr 24 2025, 12:43 PM IST

Jammu: People protest over the Pahalgam terrorist attack

ಸಾರಾಂಶ

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸವನ್ನು ಸ್ಯಾಂಡಲ್‌ವುಡ್‌ ಖಂಡಿಸಿದೆ. ಶಿವಣ್ಣ, ಯಶ್‌, ಸುದೀಪ್‌, ರಮ್ಯಾ, ರಿಷಬ್ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಉಗ್ರರಿಂದ ಹತರಾದ ಕುಟುಂಬಕ್ಕೆ ಸಾಂತ್ವನದ ನುಡಿಗಳನ್ನಾಡಿದ್ದಾರೆ.

 ಸಿನಿವಾರ್ತೆ : ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸವನ್ನು ಸ್ಯಾಂಡಲ್‌ವುಡ್‌ ಖಂಡಿಸಿದೆ. ಶಿವಣ್ಣ, ಯಶ್‌, ಸುದೀಪ್‌, ರಮ್ಯಾ, ರಿಷಬ್ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಉಗ್ರರಿಂದ ಹತರಾದ ಕುಟುಂಬಕ್ಕೆ ಸಾಂತ್ವನದ ನುಡಿಗಳನ್ನಾಡಿದ್ದಾರೆ.

‘ಮುಗ್ಧ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಕ್ರೂರ ಹತ್ಯಾಕಾಂಡವನ್ನು ಕಂಡು ಬಹಳ ದುಃಖವಾಗಿದೆ. ಇಂಥಾ ಕೃತ್ಯ ಎಸಗಿದವರಿಗ ಶಿಕ್ಷೆ ಆಗಲೇಬೇಕಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು’ ಎಂದು ಯಶ್‌ ಹೇಳಿದ್ದಾರೆ.

ನಟಿ ರಮ್ಯಾ, ‘ಧರ್ಮ ಜಗತ್ತಿಗೆ ಪ್ರೇಮವನ್ನು ಸಾರಬೇಕೇ ಯುದ್ಧವನ್ನಲ್ಲ’ ಎಂದು ಹೇಳಿದ್ದಾರೆ. ಧ್ರುವ ಸರ್ಜಾ, ‘ಭಾರತಾಂಬೆಯ ಕಳಶದಂತಿರೋ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೇ. ಉಗ್ರರು ಅಮಾಯಕರ ಮೇಲೆ ನಡೆಸಿದಂಥಾ ಕೃತ್ಯ ಎಂದಿಗೂ ಯಾರೂ‌ ಕ್ಷಮಿಸಲಾಗದು’ ಎಂದಿದ್ದಾರೆ.